Img

ಈ ತಾಣದಲ್ಲಿ ಯಾವ ರೀತಿಯ ಪುಸ್ತಕಗಳು ಲಭ್ಯವಿವೆ?

ಕೃತಿಸ್ವಾಮ್ಯದ ದೃಷ್ಟಿಯಿಂದ public domain ನಲ್ಲಿರುವ ಕನ್ನಡ ಪುಸ್ತಕಗಳು ಅಂತರ್ಜಾಲದಲ್ಲಿ ಸುಲಭವಾಗಿ ಸಿಗುವಂತೆ ಮಾಡುವ ಪ್ರಯತ್ನ ಇದು.
ಮೂಲ ಕೃತಿಯ ಲೇಖಕರ ನಿಧನದ ೬೦ ವರ್ಷಗಳ ನಂತರ ಅವರ ಪುಸ್ತಕಗಳು public domain ಗೆ ಬರುತ್ತವೆ. ಅಂತಹ ಕನ್ನಡ ಪುಸ್ತಕಗಳನ್ನು ಸಂಗ್ರಹಿಸಿ ಇಲ್ಲಿ ಅಪ್ಲೋಡ್ ಮಾಡಲಾಗಿದೆ. ಇವಲ್ಲದೆ, ಲೇಖಕರ ಅನುಮತಿ ಪಡೆದು ಇತರ ಪುಸ್ತಕಗಳನ್ನು ಅಪ್ಲೋಡ್ ಮಾಡಲಾಗಿದೆ.

ಕನ್ನಡವಲ್ಲದೆ, ಬೇರೆ ಭಾಷೆಗಳಲ್ಲಿ ಈ ರೀತಿಯ ತಾಣಗಳು ಇವೆಯೇ?

ಖಂಡಿತ. ಉದಾಹರಣೆಗೆ Project Gutenberg. ಈ ತಾಣದಲ್ಲಿ ಇಂಗ್ಲಿಷ್ ಮತ್ತು ಇನ್ನು ಕೆಲವು ಯುರೋಪಿಯನ್ ಭಾಷೆಗಳ ಸಾವಿರಾರು public domain ಪುಸ್ತಕಗಳು ಉಚಿತವಾಗಿ ಲಭ್ಯವಿವೆ.

ಇಲ್ಲಿ ಕಾಣಿಸಿರುವ ಒಂದು ಪುಸ್ತಕದ ಬಗ್ಗೆ ನನಗೆ ಆಕ್ಷೇಪಣೆ / ಪ್ರಶ್ನೆ ಇದೆಯಲ್ಲ?

ದಯವಿಟ್ಟು ಒಂದು ವಿ-ಅಂಚೆಯನ್ನು ಕಳಿಸಿ. ನಿಮ್ಮ ಪ್ರಶ್ನೆಗೆ ತಕ್ಷಣ ಪ್ರತಿಕ್ರಯಿಸುವೆವು.

ಈ ತಾಣದಲ್ಲಿ ಇಲ್ಲದೆ ಇರುವ ಒಂದು ಪುಸ್ತಕವನ್ನು ಓದಲು ನನಗೆ ಆಸಕ್ತಿ ಇದೆ. ಅದನ್ನು ಇಲ್ಲಿ ಪ್ರಕಟಿಸಲು ಸಾಧ್ಯವೇ?

ನಿಮಗೆ ಆಸಕ್ತಿ ಇರುವ ಪುಸ್ತಕವನ್ನು ವಿ-ಅಂಚೆ, ಫೇಸ್ ಬುಕ್ ಅಥವಾ ಟ್ವಿಟರ್ ಮೂಲಕ ನಮಗೆ ತಿಳಿಸಿ.

ಈ ತಾಣಕ್ಕೆ ನಾನು ಸಹಾಯ ಮಾಡಬಹುದೇ?

ಖಂಡಿತ. ಪುಸ್ತಕಗಳನ್ನು ವಿ-ಮಾಧ್ಯಮಕ್ಕೆ ಬದಲಾಯಿಸಲು, ಮತ್ತು ಪುಸ್ತಕಗಳ ಬಗ್ಗೆ ಚುಟುಕಾದ ಲೇಖನಗಳನ್ನು ಬರೆಯಲು ನೀವು ಸಹಾಯ ಮಾಡಬಹುದು. ನಿಮಗೆ ಸಮಯಾವಕಾಶವಿದ್ದಲ್ಲಿ ದಯವಿಟ್ಟು ಒಂದು ವಿ-ಅಂಚೆಯನ್ನು ಕಳಿಸಿ