ವಚನ ಸಾಹಿತ್ಯ ಕನ್ನಡಕ್ಕೆ ವಿಶಿಷ್ಟವಾದ ಸಾಹಿತ್ಯ ಪ್ರಕಾರ. ಕನ್ನಡದಲ್ಲಿ ವಚನ ಸಾಹಿತ್ಯದ ಉಗಮವನ್ನು ‘ಸಾಹಿತ್ಯ ಕ್ರಾಂತಿ’ ಎಂದು ಕರೆಯಬಹುದು. ಇದಕ್ಕಿಂತ ಮಿಗಿಲಾಗಿ, ಇದು ಸಾಮಾಜಿಕ ಕ್ರಾಂತಿಯೊಂದರ ಸಾಹಿತ್ಯಕ ಅಭಿವ್ಯಕ್ತಿ ಎಂದು ಹೇಳಬಹುದು.

ವಚನಗಳು ಅನೇಕ ರೀತಿಗಳಿಂದ ವೈವಿಧ್ಯಮಯವಾಗಿವೆ. ವಿವಿಧ ಜಾತಿಗಳಿಂದ ಬಂದ ಅನೇಕರು ವಚನಗಳನ್ನು ರಚಿಸಿದ್ದಾರೆ. ಸರಳ ನೀತಿಗಳನ್ನು ಬೋಧಿಸುವ ವಚನಗಳಿಂದ ಹಿಡಿದು ಆಳವಾದ ತತ್ವಗಳನ್ನು ತಿಳಿಗನ್ನಡದಲ್ಲಿ ವಿಶದಪಡಿಸುವ ವಚನಗಳ ವರೆಗೆ ವಿವಿಧ ರೀತಿಯ ವಚನಗಳು ಕಂಡುಬರುತ್ತವೆ. ಸರಳ ಗದ್ಯ-ಪದ್ಯಗಳಿಂದ ಹಿಡಿದು ‘ಬೆಡಗಿನ ವಚನಗಳ’ ವರೆಗೆ ರಚನಾ ಶೈಲಿಯಲ್ಲಿಯೂ ವೈವಿಧ್ಯತೆಯನ್ನು ಕಾಣಬಹುದು.

ವಚನ ಸಾಹಿತ್ಯ:

ವಚನಗಳು